Respectful tribute to Kodagu's proud son, army officer, Padmabhushan awardee General K.S. Thimmaiah on his death anniversary., 19/12/2025

ಕೊಡಗಿನ ಹೆಮ್ಮೆಯ ಸುಪುತ್ರ, ಸೇನಾಧಿಕಾರಿ, ಪದ್ಮಭೂಷಣ ಪುರಸ್ಕೃತ ಜನರಲ್ ಕೆ.ಎಸ್ ತಿಮ್ಮಯ್ಯ ರವರ ಪುಣ್ಯ ಸ್ಮರಣೆಯಂದು ಅವರಿಗೆ ಗೌರವ ಪೂರ್ವಕ ನಮನಗಳು.


In front of the Gandhi statue of Belgaum Suvarna Soudha, Karnataka Pradesh Congress Committee, in relation to *National Herald False Case* against Mrs. Sonia Gandhi and Shri Rahul Gandhi, participated in the protest led by Hon'ble Chief Minister Shri Sidd, 17/12/2025

ಬೆಳಗಾವಿ ಸುವರ್ಣ ಸೌಧದ ಗಾಂಧಿ ಪ್ರತಿಮೆ ಮುಂಭಾಗ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ, ಶ್ರೀಮತಿ ಸೋನಿಯಾ ಗಾಂಧಿ ಹಾಗೂ ಶ್ರೀ ರಾಹುಲ್ ಗಾಂಧಿ ವಿರುದ್ಧ *ನ್ಯಾಷನಲ್ ಹೆರಾಲ್ಡ್ ಸುಳ್ಳು ಕೇಸ್* ಸಂಬಂಧವಾಗಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.


Billions of salute to the brave soldiers on the day when Indian armed forces won against Pakistan during the 1971 Bangladesh liberation war, 16/12/2025

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ, ಪಾಕಿಸ್ಥಾನದ ವಿರುದ್ಧ ಭಾರತದ ಸಶಸ್ತ್ರ ಪಡೆಗಳು ದಿಗ್ವಿಜಯ ಸಾಧಿಸಿದ ದಿನದಂದು ವೀರ ಯೋಧರಿಗೆ ಶತಕೋಟಿ ನಮನಗಳು.


I am very sad to hear about the death of senior Congress party leader former minister, MLA Shamanur Shivashankarappa. The separation of one of the prominent people who built the party by committing to Congress party's ideology is an irreparable loss to Co, 15/12/2025

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾಜಿ ಸಚಿವರು, ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖ ಉಂಟಾಗಿದೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷ ಕಟ್ಟಿದ ಪ್ರಮುಖರಲ್ಲಿ ಒಬ್ಬರಾದ ಇವರ ಅಗಲಿಕೆಯು, ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ವರ್ಗದವರಿಗೆ, ಬಂಧು-ಮಿತ್ರರಿಗೆ ಮತ್ತು ಅಪಾರ ಅಭಿಮಾನಿ ಬಳಗದವರಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.


Participated in *Vote thief Gaddi Chod* protest organized by AICC at Ramleela ground, Delhi. AICC President Shri Mallikarjun Kharge, Mrs Sonia Gandhi, Mr. Rahul Gandhi, Mrs. Priyanka Gandhi, Honorable Chief Minister of Karnataka, Mr. Siddaramaiah, KPCC Pr, 15/12/2025

ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ, ಎಐಸಿಸಿ ವತಿಯಿಂದ ಹಮ್ಮಿಕೊಂಡಿದ್ದ *ವೋಟ್ ಚೋರ್ ಗದ್ದಿ ಚೋಡ್* ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರು , ಶ್ರೀಮತಿ ಸೋನಿಯಾ ಗಾಂಧಿ ಅವರು, ಶ್ರೀ ರಾಹುಲ್ ಗಾಂಧಿ ಅವರು, ಶ್ರೀಮತಿ ಪ್ರಿಯಾಂಕ ಗಾಂಧಿ ಅವರು , ಕರ್ನಾಟಕ ರಾಜ್ಯ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ,ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರು,ಸಚಿವರು‌ ಮತ್ತಿತರ ಮುಖಂಡರು ಭಾಗವಹಿಸಿದ್ದರು.