Road inauguration was directed at Madikeri Taluk Bettageri Grama Panchayat of Virajpet assembly constituency and then visited the Jumma Mosque there to get information about the development works., 14/02/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಬೆಟ್ಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಉದ್ಘಾಟನೆ ನೇರವೇರಿಸಿ ನಂತರ ಅಲ್ಲಿನ ಜುಮ್ಮಾ ಮಸೀದಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಲಾಯಿತು.


Participated in the inauguration of Kodava Welfare and Recreation Association's new building Kodava Bhavan and Kodava book finding program at Madikeri Taluk, Arekadu, 14/02/2026

ಮಡಿಕೇರಿ ತಾಲೂಕು ಅರೆಕಾಡುವಿನಲ್ಲಿ ಕೊಡವ ವೆಲ್‌ಫೇರ್ ಮತ್ತು ರಿಕ್ರಿಯೇಷನ್ ಅಸೋಸಿಯೇಶನ್‌ನ ನೂತನ ಕಟ್ಟಡ ಕೊಡವ ಭವನ ಉದ್ಘಾಟನೆ ಹಾಗೂ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.


Heartfelt tribute to the brave soldiers who were martyred in Karala Pulwama terrorist attack, 14/02/2026

ಕರಾಳ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ನಮನಗಳು.


Participated in Bhoomi Pooja programs for public programs and various development works in Virajapet, Ponnampet and Gonikoppa areas., 13/02/2026

ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಭಾಗದಲ್ಲಿ ಸಾರ್ವಜನಿಕ ಕಾರ್ಯಕ್ರಮ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾಯಿತು.


The cattle eater tiger who was captured yesterday in Besaguru, Ponnampete, went to Kengeri via Metro from Vidhana Soudha to Bannerghatta National Park, discussed with forest officials who were travelling to Bannerghatta with the captured tiger. Appreciati, 11/02/2026

ಪೊನ್ನಂಪೇಟೆಯ ಬೆಸಗೂರಿನಲ್ಲಿ ನಿನ್ನೆ ಸೆರೆಸಿಕ್ಕ ಜಾನುವಾರು ಭಕ್ಷಕ ಹುಲಿಯನ್ನು ಇಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸುವ ಸಂದರ್ಭದಲ್ಲಿ ವಿಷಯ ತಿಳಿದೊಡನೆ ವಿಧಾನಸೌಧದಿಂದ ಮೆಟ್ರೋ ಮುಖಾಂತರ ಕೆಂಗೇರಿಗೆ ತೆರಳಿ, ಸೆರೆ ಸಿಕ್ಕ ಹುಲಿಯೊಂದಿಗೆ ಬನ್ನೇರುಘಟ್ಟಕ್ಕೆ ತೆರಳುತ್ತಿದ್ದ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹುಲಿಯನ್ನು ವೀಕ್ಷಿಸಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕ್ಷೀಪ್ರ ಕಾರ್ಯಾಚರಣೆ ಹಾಗೂ ಜನರ ತೊಂದರೆಗೆ ಸ್ಪಂದಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.