Bhoomi Pooja Held for Virajpet–Gonikoppalu Main Road Development, 26/09/2026
ವಿರಾಜಪೇಟೆಯಿಂದ ಗೋಣಿಕೊಪ್ಪಲುವಿಗೆ ತೆರಳುವ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿದ ಸಂದರ್ಭ.

Preliminary Meeting Held for Kodava Hockey Festival 2027, 26/09/2026
2027 ನೇ ಸಾಲಿನ ಪ್ರತಿಷ್ಠಿತ ಕೊಡವ ಹಾಕಿ ಉತ್ಸವ, ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಪೂರ್ವಭಾವಿ ಸಭೆಯು ಇಂದು ವಿರಾಜಪೇಟೆಯ ನನ್ನ ಗೃಹ ಕಚೇರಿಯಲ್ಲಿ ನಡೆಯಿತು. ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷರಾದ ಅಜ್ಜಿಕುಟ್ಟಿರ ಎಸ್ ನರೇನ್ ಕಾರ್ಯಪ್ಪ, ಹಾಗೂ ಅಜ್ಜಿಕುಟ್ಟಿರ ಕುಟುಂಬದ ಸರ್ವ ಸದಸ್ಯರು ಭಾಗವಹಿಸಿದ ಈ ಸಭೆಯಲ್ಲಿ ಮುಂಬರುವ ಕ್ರೀಡಾಕೂಟದ ಪ್ರಯುಕ್ತ ಪೂರ್ವಭಾವಿ ತಯಾರಿ ಬಗ್ಗೆ ಚರ್ಚಿಸಲಾಯಿತು.

**Sports, Cultural, NSS, Red Cross and Rovers-Rangers Activities Inaugurated at Virajpet First Grade College**, 26/09/2026
ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆಯ ಸಭಾಂಗಣದಲ್ಲಿ ನಡೆದ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್, ರೆಡ್ ಕ್ರಾಸ್, ರೋವರ್ಸ್-ರೇಂಜರ್ಸ್ ಮತ್ತು ವಿವಿಧ ಸಮಿತಿಗಳ 2026-27 ಸಾಲಿನ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾಹಿತಿ ಪಡೆದ ಸಂದರ್ಭ.

Participated in Ganeshotsava Celebrations Organized by Various Samitis, 26/09/2026
ವಿರಾಜಪೇಟೆಯ ಗೌರಿ ಗಣೇಶ ಉತ್ಸವ ಸಮಿತಿ ಬಸವೇಶ್ವರ ದೇವಸ್ಥಾನ, ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ, ಶ್ರೀ ವಿಗ್ನೇಶ್ವರ ಸೇವಾ ಸಮಿತಿ, ಶ್ರೀ ವಿನಾಯಕ ಯುವ ಸಮಿತಿ ವತಿಯಿಂದ ಆಯೋಜಿಸಿದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

Kail Muhurta Jambara-2026 Held at Kodagu Gowda Samaja Hall, Bengaluru, 24/09/2026
ದಿನಾಂಕ: 04-10-2026 ರಂದು ಕೊಡಗು ಗೌಡ ಸಮಾಜ ಸಭಾಂಗಣ, ಉಳ್ಳಾಲು, ಬೆಂಗಳೂರಿನಲ್ಲಿ ಏರ್ಪಡಿಸಿರುವ ಕೈಲ್ ಮುಹೂರ್ತ ಜಂಬರ -2026ರ ಕಾರ್ಯಕ್ರಮಕ್ಕೆ ಕೊಡಗು ಗೌಡ ಸಮಾಜದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ನನ್ನನ್ನು ಆಹ್ವಾನಿಸಿದ ಸಂದರ್ಭ.
