Appachcha Kavi Attends Kgatnaad Kodava Sangha’s Sixth Year Get-Together, 20/07/2026
ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಂಗಣದಲ್ಲಿ ಆಯೋಜಿಸಿದ ಆರನೇ ವರ್ಷದ ಕ್ಗ್ಗಟ್ನಾಡ್ ಕೊಡವ ಸಂಘ ಬೆಂಗಳೂರು ಇವರ (ಒತ್ತೋರ್ಮೆ ಕೂಟ) ಸಮ್ಮಿಲನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಿದೆ. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ, ಕ್ಗ್ಗಟ್ನಾಡ್ ಕೊಡವ ಸಂಘದ ಏಳಿಗೆಗೆ ಪ್ರತಿಯೊಬ್ಬ ಸದಸ್ಯನು ಶ್ರಮಿಸಬೇಕು. ಕ್ಗ್ಗಟ್ನಾಡ್ ಕೊಡವ ಸಂಘ ಹಾಗೂ ಅದರ ಸಂಘಟನೆ ಮತ್ತು ಆಚಾರ ವಿಚಾರ ಮತ್ತಷ್ಟು ಬೆಳೆಯಬೇಕೆಂದರೆ ಸಂಘಟನೆಯ ಹಾಗೂ ಸಮಾಜದ ಪ್ರತಿಯೊಬ್ಬರು ತಮ್ಮ ಕೊಡುಗೆಯನ್ನು ನೀಡಲೇಬೇಕು. ಆ ಮೂಲಕ ಕೊಡವ ಸಾಹಿತ್ಯ, ಸಂಸ್ಕೃತಿ ಮತ್ತು ಆಚರಣೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಲು ಪ್ರತಿಯೊಬ್ಬರೂ ಶ್ರಮಿಸಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಸಮುದಾಯದ ಯುವ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿ ಹಾಗೂ ಆಚರಣೆಗಳ ವಿಷಯವನ್ನು ಮನದಟ್ಟು ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಸಮ್ಮಿಲನ ಕೂಟಗಳು ಹಾಗೂ ವಿಚಾರ ವಿನಿಮಯ ಅತ್ಯಂತ ಸಹಕಾರಿಯಾಗಲಿದೆ.

New App Launched for Direct Public Grievance Sharing with MLA, 20/07/2026
"ASP MY MLA" ಎಂಬ ಜನಸ್ನೇಹಿಯಾದ ಹಾಗೂ ಜನಸಾಮಾನ್ಯರಿಗೆ ನನ್ನನ್ನು ನೇರವಾಗಿ ಸಂಪರ್ಕಿಸಿ ಅವರ ದೂರು-ದುಮ್ಮಾನಗಳನ್ನು ಹಂಚಿಕೊಂಡು, ಅಗತ್ಯ ಮಾಹಿತಿ ನೀಡಲು ನೂತನ ಅಪ್ಲಿಕೇಶನ್ ಅನಾವರಣಗೊಳಿಸಿದ ಸಂದರ್ಭ.

Former PM H.D. Deve Gowda’s Wife Chennamma Passes Away, 18/07/2026
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ನಾಯಕರಾದ ಶ್ರೀ ಹೆಚ್.ಡಿ ದೇವೇಗೌಡರವರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ರವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಖ ಆಗಿದೆ.
ಜೀವನದ ಎಲ್ಲಾ ಮಜಲುಗಳಲ್ಲಿ ತನ್ನ ಪತಿಯೊಂದಿಗೆ ಬೆನ್ನೆಲುಬಾಗಿದ್ದ ಇವರ ಜೀವನ ಎಲ್ಲರಿಗೂ ಮಾದರಿ ಹಾಗೂ ಆದರ್ಶಪ್ರಾಯ. ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಅವರ ಕುಟುಂಬ ವರ್ಗಕ್ಕೆ ಹಾಗೂ ಅಪಾರ ಬಂಧು-ಬಳಗಕ್ಕೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Barrier work completed for agricultural land in Koyanadu, Madikeri taluk, 18/07/2026
ಮಡಿಕೇರಿ ತಾಲೂಕು ಕೊಯನಾಡು ಭಾಗದ ಮೊಹಮ್ಮದ್ ಕುನ್ನಿ ಮತ್ತು ಇತರರ ಕೃಷಿ ಜಮೀನಿಗೆ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ.

Barrier Construction Work in Progress at Amma Kodava Society, Gonikoppa, 18/07/2026
ಗೋಣಿಕೊಪ್ಪ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಅಮ್ಮ ಕೊಡವ ಸಮಾಜದ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ.
