Inaugurated the "Biryani Challenge" program organized by Tanal organization in support of dialysis facility for poor patients at Shadi Mahal of Nelyahudikeri, Siddapura. The social work of the organization is commendable, 29/10/2025

ಸಿದ್ದಾಪುರ ನೆಲ್ಯಹುದಿಕೇರಿಯ ಶಾದಿ ಮಹಲ್ ನಲ್ಲಿ ಬಡ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯದ ಸಹಾಯಾರ್ಥಕ್ಕೆ ತನಲ್ ಸಂಸ್ಥೆ ಆಯೋಜಿಸಿದ್ದ “ಬಿರಿಯಾನಿ ಚಾಲೆಂಜ್” ಕಾರ್ಯಕ್ರಮವನ್ನು ಉದ್ಘಾಟಿಸಿದೆ. ಸಂಸ್ಥೆಯ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ.


Savita society's new president Nayandira Shivaji, handed over the letter of power and promised to fully support the overall development of the society, 29/10/2025

ಸವಿತಾ ಸಮಾಜದ ನೂತನ ಅಧ್ಯಕ್ಷರಾಗಿರುವ ನಾಯಾಂದಿರ ಶಿವಾಜಿರವರಿಗೆ ಶುಭ ಕೋರಿ ಅಧಿಕಾರ ಪತ್ರ ಹಸ್ತಾಂತರಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದೆ.


Many thanks to Sadik, a resident of Virajpet, artist, 29/10/2025

ವಿರಾಜಪೇಟೆ ನಿವಾಸಿ,ಕಲಾವಿದರಾದ ಸಾಧಿಕ್ ರವರ ಈ ಅದ್ಭುತ ಕಲಾಕೃತಿಗೆ ಅನಂತ ಧನ್ಯವಾದಗಳು.


Mr. India Universe 2025 award winner congratulates Karineravanda Bishan Madappa of Palangala village Virajpet Taluk and wish him all the best in future, 29/10/2025

ಮಿಸ್ಟರ್ ಇಂಡಿಯಾ ಯೂನಿವರ್ಸ್ 2025ರ ಪ್ರಶಸ್ತಿ ವಿಜೇತರಾದ ವಿರಾಜಪೇಟೆ ತಾಲೂಕು ಪಾಲಂಗಾಲ ಗ್ರಾಮದ ಕರಿನೇರವಂಡ ಬಿಷನ್ ಮಾದಪ್ಪ ರವರಿಗೆ ಅಭಿನಂದಿಸಿ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ಶುಭ ಹಾರೈಸಿದೆ.


Received public reports at Ponnampete Taluk MLA's office today and given immediate compensation to many reports on the spot and rest of the applications were assured to be resolved soon, 28/10/2025

ಇಂದು ಪೊನ್ನಂಪೇಟೆ ತಾಲ್ಲೂಕಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಅನೇಕ ಅಹವಾಲುಗಳಿಗೆ ತಕ್ಷಣದ ಪರಿಹಾರ ನೀಡಲಾಯಿತು ಹಾಗೂ ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಲಾಯಿತು.