Grant for Gowda Samaja, 13/11/2022
Grant for Gowda Samaja. ಗೌಡ ಸಮಾಜಕ್ಕೆ ಅನುದಾನ
ನಾಪೋಕ್ಲು ಬ್ಲಾಕ್'ನ ಭಾಗಮಂಡಲ ವಲಯದಲ್ಲಿ ತಲೆ ಎತ್ತಲಿರುವ ಗೌಡ ಸಮಾಜಕ್ಕೆ ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಎಂ.ನಾಗರಾಜು ರವರು ನನ್ನ ಕೋರಿಕೆ ಮೇರೆಗೆ ಶಾಸಕರ ನಿಧಿಯಿಂದ 3 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಗೌಡ ಸಮಾಜಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮಾನ್ಯ ಎಂ.ನಾಗರಾಜು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಮಾಜವನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಿರುವ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸುತ್ತೇನೆ.
ಈ ಸಂದರ್ಭದಲ್ಲಿ, ಕೆದಂಬಾಡಿ ಟಿ ರಮೇಶ್, ಕುದುಪಜೆ ಕೆ ಪ್ರಕಾಶ್, ನಿಡ್ಯೆಮತಿ ವಿ ದಾಮೋದರ, ನಿಡ್ಯೆಮತಿ ಎಂ ರವಿಶಲ, ದೇವಂಗೋಡಿ ಎನ್ ಹರ್ಷ ಜೊತೆಗಿದ್ದರು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #GowdaSamaja

Donation of laptop and printer to the association of specially-abled people, 12/11/2022
Donation of laptop and printer to the association of specially-abled people. ದಿವ್ಯಾಂಗರ ಒಕ್ಕೂಟಕ್ಕೆ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್ ವಿತರಣೆ
ಕೆಲ ದಿನಗಳ ಹಿಂದೆ ಪೊನ್ನಂಪೇಟೆಯ ದಿವ್ಯಾಂಗರ ಒಕ್ಕೂಟಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಕಚೇರಿಗೆ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್ ಅವಶ್ಯಕತೆಯ ಬಗ್ಗೆ ತಿಳಿಯಿತು.
ಈ ಸಲುವಾಗಿ ಮತ್ತೆ ಅಲ್ಲಿಗೆ ಭೇಟಿ ಕೊಟ್ಟು ಒಕ್ಕೂಟಕ್ಕೆ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್'ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ದಿವ್ಯಾಂಗರ ಒಳಿತಿಗೆ ದುಡಿಯುತ್ತಿರುವ ಈ ಸಂಸ್ಥೆಗೆ ಇನ್ನಷ್ಟು ಬಲ ಬಂದು ಮತ್ತಷ್ಟು ಸಮಾಜಸೇವೆ ಅವರಿಂದ ಆಗಲಿ ಎಂದು ಹಾರೈಸುತ್ತೇನೆ. ಅವರ ಸಮಾಜಮುಖಿ ಕೆಲಸಗಳಿಗೆ ಸದಾ ನನ್ನ ಬೆಂಬಲವಿರಲಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #SpeciallyAbled

Remembering poet, philosopher and social reformer Sri Kanakadasa on his birth anniversary, 11/11/2022
Remembering poet, philosopher and social reformer Sri #Kanakadasa on his birth anniversary. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ. ಎಲ್ಲರಿಗೂ, ದಾಸ ಶ್ರೇಷ್ಠ ಕನಕದಾಸ ಜಯಂತಿಯ ಶುಭಾಶಯಗಳು.
#KanakaDasaJayanti

The High Court of Karnataka has set aside the lower court order regarding blocking of the Party's Twitter accounts - AS Ponnanna, 08/11/2022
The High Court of Karnataka has set aside the lower court order regarding blocking of the Party's Twitter accounts - AS Ponnanna ಚಲನಚಿತ್ರ ಸಂಗೀತದ ಕೃತಿಸ್ವಾಮ್ಯ ಕುರಿತು ಕೆಳಗಿನ ನ್ಯಾಯಾಲಯ ನೀಡಿದ್ದ ಆದೇಶವನ್ನು ಪಕ್ಷದ ಪರವಾಗಿ ಇಂದು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿದೆ - ಎ.ಎಸ್.ಪೊನ್ನಣ್ಣ
#Twitter #BharatJodoYatra #KarnatakaHighCourt #INC #bantwitter #@CNNNews18 @ANI @barandbench

Family hockey tournament in Ponnampet, 07/11/2022
ಪೊನ್ನಂಪೇಟೆಯಲ್ಲಿ ಕುಟುಂಬ ಹಾಕಿ ಪಂದ್ಯಾವಳಿ
ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ಶ್ರೀ ಪಾಂಡಂಡ ಕುಟ್ಟಪ್ಪ ಸ್ಮಾರಕ ಹಾಕಿ ಪಂದ್ಯಾವಳಿ ವೀಕ್ಷಿಸಲು ಭೇಟಿ ನೀಡಿದ ಸಂದರ್ಭ. ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯಗಳನ್ನು ವೀಕ್ಷಿಸುವುದೇ ರೋಮಾಂಚನ ತರುತ್ತದೆ. ಹಲವಾರು ಕುಟುಂಬಗಳ ತಂಡಗಳ ಪೈಪೋಟಿಯಿಂದ ಕೂಡಿದ ಹಣಾಹಣಿ ನಮ್ಮ ಪರಂಪರೆಗಳನ್ನು ಉಳಿಸಿ ಬೆಳಸುವ ಒಂದು ಮುಖ್ಯ ಸಾಧನವಾಗಿದೆ.
ರಾಜ್ಯ ಹಾಗೂ ದೇಶದ ಹಾಕಿ ತಂಡಗಳಿಗೆ ಹಲವಾರು ಹಾಕಿಪಟುಗಳನ್ನು ಕೊಟ್ಟ ನಮ್ಮ ಕೊಡಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಆಟಗಾರರನ್ನು ರೂಪಿಸಿದೆ. ಇದಕ್ಕೆ ಮೂಲ, ಈ ರೀತಿಯ ಕುಟುಂಬ ಪಂದ್ಯಾವಳಿಗಳು.
ಈ ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಡೆಸಿದ ಆಯೋಜಕರಿಗೂ, ನಮ್ಮ ಸಂಪ್ರದಾಯಗಳನ್ನು ಮುಂದುವರೆಸುತ್ತ ಕ್ರೀಡಾ ಮನೋಭಾವದಿಂದ ಇದರಲ್ಲಿ ಪಾಲ್ಗೊಂಡ ಎಲ್ಲಾ ಕುಟುಂಬಗಳ ತಂಡಗಳಿಗೂ, ಕ್ರೀಡಾಪಟುಗಳಿಗೂ ಹಾರ್ದಿಕ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #Nalnad #Hockey #FamilyHockey #ASPonnanna
