AICC President Shri Mallikarjuna Kharge, who was elected as new Rajya Sabha member, was met and congratulated him in Bangalore., 13/06/2026

ನೂತನ ರಾಜ್ಯಸಭೆ ಸದಸ್ಯರಾಗಿ ಅವಿರೋಧ ಆಯ್ಕೆಯಾದ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.


Road development work going to the house of Macharanda family members of Kannangala Panchayat, Virajpet taluk has been completed., 13/06/2026

ವಿರಾಜಪೇಟೆ ತಾಲೂಕು ಕಣ್ಣಂಗಾಲ ಪಂಚಾಯಿತಿ ವ್ಯಾಪ್ತಿಯ ಮಚ್ಚಾರಂಡ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ.

Hearty congratulations to Congress party candidates Honorable Shri Mallikarjuna Kharge, Shri Mansoor Ali Khan, Shri Pawan Khera for being elected unopposed to Rajya Sabha from Karnataka., 13/06/2026

ಕರ್ನಾಟಕದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ, ಶ್ರೀ ಮನ್ಸೂರ್ ಅಲಿಖಾನ್, ಶ್ರೀ ಪವನ್ ಖೇರಾ ಅವರಿಗೆ ಹಾರ್ದಿಕ ಅಭಿನಂದನೆಗಳು.


The construction work of a well-equipped government hospital which was long demanded by the people of the constituency and Virajpet is in full swing, as part of the 400 bed upper class hospital demanded to the government, the 250 bed government hospital a, 13/06/2026

ಕ್ಷೇತ್ರದ ಹಾಗೂ ವಿರಾಜಪೇಟೆ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಸುಸಜ್ಜಿತ ಸರಕಾರಿ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಸರಕಾರಕ್ಕೆ ಬೇಡಿಕೆ ಸಲ್ಲಿಸಿದ 400 ಹಾಸಿಗೆಗಳ ಮೇಲ್ದರ್ಜೆ ಆಸ್ಪತ್ರೆಯ ಭಾಗವಾಗಿ, ಸರಕಾರ ಅನುಮೋದಿಸಿದ 250 ಹಾಸಿಗೆಯುಳ್ಳ ಸರಕಾರಿ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದೆ.

 


As part of the decades of demanding electricity connectivity to the residents of Bommadu Girijan Hadi of Nalkeri Gram Panchayat, Ponnampete Taluk, this work was conducted with a special grant from the government., 11/06/2026

ಪೊನ್ನಂಪೇಟೆ ತಾಲೂಕು ನಾಲ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮಡು ಗಿರಿಜನ ಹಾಡಿಯ ನಿವಾಸಿಗಳ ದಶಕಗಳ ಬೇಡಿಕೆಯಾದ ವಿದ್ಯುತ್ ಸಂಪರ್ಕ ಕಲ್ಪಿಸುವ ಭಾಗವಾಗಿ, ಸರಕಾರದಿಂದ ವಿಶೇಷ ಅನುದಾನದಲ್ಲಿ ಈ ಕಾರ್ಯವನ್ನು ನೆರವೇರಿಸಲಾಯಿತು.