22nd Annual Gathering of Panjarpet Kodava Keri Residents Held, 21/08/2026
ವಿರಾಜಪೇಟೆಯ ಪಂಜರಪೇಟೆ ಭಾಗದ ಕೊಡವ ಕೇರಿ ನಿವಾಸಿಗಳ ಸಮಿತಿಯ ಸದಸ್ಯನಾಗಿ ಅವರುಗಳು ಆಯೋಜಿಸಿದ 22ನೇ ವರ್ಷದ ಮಹಾಸಭೆಯಲ್ಲಿ ಭಾಗವಹಿಸಿದ ಸಂದರ್ಭ.

Kodava Muslim Sports Academy Hosts Mudfield Sports Event in Kometodu, 21/08/2026
ವಿರಾಜಪೇಟೆ ತಾಲೂಕಿನ ಕೊಮ್ಮೆತೋಡು ಗ್ರಾಮದಲ್ಲಿ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ ರವರು ಆಯೋಜಿಸಿದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಲಾಯಿತು.
ಕ್ರೀಡಾಕೂಟಕ್ಕೆ ಶುಭ ಕೋರುತ್ತಾ ಕೊಡಗಿನ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪ್ರಸಿದ್ಧ ಗ್ರಾಮೀಣ ಕ್ರೀಡಾಕೂಟವಾದ ಕೆಸರುಗದ್ದೆ ಈಗಲೂ ಯುವಕರನ್ನು ಆಕರ್ಷಿಸುವ ಕ್ರೀಡೆಯಾಗಿದೆ. ವೈಜ್ಞಾನಿಕವಾಗಿ ಗಮನಿಸಿದರೆ, ನಮ್ಮ ಪೂರ್ವಜರು ಗದ್ದೆಯಲ್ಲಿ ನಾಟಿ ಚಟುವಟಿಕೆ ಆರಂಭಿಸುವ ಮೊದಲು ಈ ಕ್ರೀಡೆಯನ್ನು ಹಿಂದಿನಿಂದಲೂ ಆಯೋಜಿಸುತ್ತಾ ಬಂದಿದ್ದಾರೆ. ಇದರಿಂದಾಗಿ ಗದ್ದೆಯ ಮಣ್ಣು ಮತ್ತಷ್ಟು ಫಸಲು ನೀಡಲು ಯೋಗ್ಯವಾಗಿ ಮಾರ್ಪಾಡುವುದನ್ನು ಹಿಂದಿನಿಂದಲೇ ಮನಗಂಡಿದ್ದ ನಮ್ಮ ಪೂರ್ವಜರು, ಕ್ರೀಡಾ ರೂಪದಲ್ಲಿ ಈ ಕೆಲಸವನ್ನು ಮಾಡಿ ತಮ್ಮ ಜೀವನಕ್ಕೆ ಆದಾಯವಾದ ಬೇಸಾಯಕ್ಕೆ ಅನುವು ಮಾಡುವ ಕಾರ್ಯಕ್ರಮ ಹೊಂದಿದ್ದರು. ಇಂತಹ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಿದ ಸ್ಪೋರ್ಟ್ಸ್ ಅಕಾಡೆಮಿ ಅವರಿಗೆ ಹಾಗೂ ಸಮಸ್ತರಿಗೆ ಶುಭವಾಗಲಿ ಎಂದು ಹಾರೈಸಲಾಯಿತು.

Warm Varamahalakshmi Festival wishes to everyone across the state, 21/08/2026
ನಾಡಿನ ಸಮಸ್ತ ಜನತೆಗೆ
ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು

Kasturirangan Report Must Be Rejected: Farmers’ Interests Defended in Assembly, 21/08/2026
ರಾಜ್ಯದ ಅದರಲ್ಲೂ ವಿಶೇಷವಾಗಿ ಮಲೆನಾಡಿನ ರೈತರನ್ನು ಬಹುವಾಗಿ ಕಾಡುತ್ತಿರುವ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲೇಬೇಕು ಎಂಬ ವಾದವನ್ನು ಸದನದಲ್ಲಿ ಮಂಡಿಸಿ ವಿರೋಧ ಪಕ್ಷದವರ ಅಡ್ಡಿಪಡಿಸುವಿಕೆಯ ನಡುವೆಯೂ ಯಶಸ್ವಿಯಾಗಿ ಮಂಡಿಸಲಾಯಿತು.

Forest Department Captures Leopard Responsible for Human Deaths, 21/08/2026
ಕ್ಷೇತ್ರದಲ್ಲಿ ಜನರನ್ನು ಬಲಿ ಪಡೆದ ಪುಂಡಾನೆಗಳನ್ನು ಸೆರೆಹಿಡಿಯಲು ಸೂಚಿಸಿದ ಪರಿಣಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಅಮ್ಮತ್ತಿ ಭಾಗದಲ್ಲಿ ನರಹಂತಕ ಪುಂಡಾನೆಯನ್ನು ಸೆರೆಹಿಡಿದ ಕ್ಷಣ.
