Since I am participating in the 16th Assembly, 9th Assembly session of Karnataka, which will be held from 06/03/2026 to 27/03/2026, will not be available in the constituency on the days of art. The public of Virajpet constituency is requested to contact M, 06/03/2026

ದಿನಾಂಕ 06/03/2026 ರಿಂದ 27/03/2026 ರ ತನಕ ನಡೆಯುವ, ಕರ್ನಾಟಕದ 16 ನೇ ವಿಧಾನಸಭೆಯ, 9 ನೇ ವಿಧಾನಸಭಾ ಅಧಿವೇಶನದಲ್ಲಿ ನಾನು ಭಾಗವಹಿಸುತ್ತಿರುವುದರಿಂದ, ಕಲಾಪದ ದಿನಗಳಲ್ಲಿ ಕ್ಷೇತ್ರದಲ್ಲಿ ಲಭ್ಯವಿರುವುದಿಲ್ಲ. ವಿರಾಜಪೇಟೆ ಕ್ಷೇತ್ರದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ತಾಲ್ಲೂಕು ಕೇಂದ್ರಗಳಲ್ಲಿರುವ ಶಾಸಕರ ಕಚೇರಿಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.


Land pooja and inauguration were conducted for various development works in Virajpet taluk's Kannangala and Channayyanakote area of Virajpet assembly constituency., 06/03/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಹಾಗೂ ಚನ್ನಯ್ಯನಕೋಟೆ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರೆವೇರಿಸಲಾಯಿತು.


Chowdeshwari Youth Club wishes the first year league model cricket tournament at Ammathi GMP ground Virajpet taluk., 06/03/2026

ವಿರಾಜಪೇಟೆ ತಾಲೂಕು ಅಮ್ಮತಿಯ ಜಿ ಎಂ ಪಿ ಮೈದಾನದಲ್ಲಿ ಚೌಡೇಶ್ವರಿ ಯೂಥ್ ಕ್ಲಬ್ ವತಿಯಿಂದ ನಡೆಯುತ್ತಿರುವ ಮೊದಲನೇ ವರ್ಷದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟಕ್ಕೆ ಶುಭ ಕೋರಲಾಯಿತು.


Kodagu Gowda society and all the Gowda societies of Kodagu Gowda society for granting six acres of land in Madikeri Taluk to Kodagu Gowda society., 05/03/2026

ಕೊಡಗು ಗೌಡ ಸಮಾಜಕ್ಕೆ ಮಡಿಕೇರಿ ತಾಲೂಕು ಮದೆನಾಡಿನಲ್ಲಿ ಸರಕಾರದ ವತಿಯಿಂದ ಆರು ಎಕರೆ ಜಾಗವನ್ನು ಮಂಜೂರು ಮಾಡಿಸಿದ್ದಕ್ಕಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಕೊಡಗಿನ ಎಲ್ಲಾ ಗೌಡ ಸಮಾಜಗಳ ವತಿಯಿಂದ ನೀಡಿದ ಅಭಿನಂದನೆಗಳನ್ನು ಗೌರವ ಪೂರ್ವಕವಾಗಿ ಸ್ವೀಕರಿಸಲಾಯಿತು.


India's famous star our Kodagu's proud actress Rashmika Mandanna and famous actor Vijaya Devarakonda participated in the wedding reception ceremony and wished the couple., 05/03/2026

ಭಾರತದ ಖ್ಯಾತ ತಾರೆ ನಮ್ಮ ಕೊಡಗಿನ ಹೆಮ್ಮೆಯ ನಟಿ ರಶ್ಮಿಕಾ ಮಂದಣ್ಣ ಹಾಗೂ ಖ್ಯಾತ ನಟ ವಿಜಯ ದೇವರಕೊಂಡ ಅವರ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ದಂಪತಿಗಳಿಗೆ ಶುಭ ಕೋರಲಾಯಿತು.