Participated in the first meeting of the 2025 Karnataka Land Revenue Second Amendment Obedience Committee regarding Kodagu district chaired by Revenue Minister Shri Krishna Bhairegowda and presented the guidelines regarding Jamma Bane land in Kodagu distr, 06/10/2025

ಕಂದಾಯ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕೊಡಗು ಜಿಲ್ಲೆಗೆ ಸಂಬಂಧಿಸಿದ 2025ನೇ ಸಾಲಿನ ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ವಿಧೇಯಕ ಪರಿಶೀಲನಾ ಸಮಿತಿಯ ಮೊದಲ ಸಭೆಯಲ್ಲಿ ಭಾಗವಹಿಸಿ ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದಂತೆ ವಿವರಣೆ ನೀಡಿ ಮಾರ್ಗೋಪಾಯ ಅಭಿಪ್ರಾಯಗಳನ್ನು ‌ಮಂಡಿಸಲಾಯಿತು.


Participated in the birthday celebration of Chandanavana star couple Bhuvan and Harshika Poonacha along with my Mrs. Kanchan Ponnanna and wishing the child a bright future, 06/10/2025

ಚಂದನವನದ ತಾರಾ ದಂಪತಿಗಳಾದ ಭುವನ್ ಹಾಗೂ ಹರ್ಷಿಕ ಪೂಣಚ್ಚ ರವರ ಮಗುವಿನ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ನನ್ನ ಶ್ರೀಮತಿ ಕಾಂಚನ್ ಪೊನ್ನಣ್ಣ ರವರ ಜೊತೆಯಲ್ಲಿ ಭಾಗವಹಿಸಿ ಮಗುವಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದೆ.


Kodagu district, Kushalanagar Taluk Kodava Samaj participated as chief guest and wished good luck., 05/10/2025

ಕೊಡಗು ಜಿಲ್ಲೆ, ಕುಶಾಲನಗರ ತಾಲೂಕು ಕೊಡವ ಸಮಾಜದವರು ಆಯೋಜಿಸಿದ ಕೈಲ್ ಪೋಳ್ದ್ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಕೋರಲಾಯಿತು.


The first phase of approval given by the government to upgrade Virajpet Taluk Hospital as a 400 bed hospital, 250 bed upper grade work at a cost of ₹ 95.6 crore will start soon. Heartfelt thanks to the Honorable Chief Minister who gave approval in the cab, 04/10/2025

ವಿರಾಜಪೇಟೆ ತಾಲೂಕು ಆಸ್ಪತ್ರೆಯನ್ನು, 400 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಸರಕಾರ ನೀಡಿದ ಅನುಮೋದನೆಯ ಮೊದಲ ಹಂತದ, ₹ 95.6 ಕೋಟಿ ವೆಚ್ಚದಲ್ಲಿ 250 ಹಾಸಿಗೆಗಳ ಮೇಲ್ದರ್ಜೆ ಕಾರ್ಯ ಸದ್ಯದಲ್ಲೇ ಆರಂಭವಾಗಲಿದ್ದು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ ಮಾನ್ಯ ಮುಖ್ಯಮಂತ್ರಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು.


Chiriyapanda Suresh Nanjappa and officers met the Bangalore Kodava Samaj administration board as president during the recent election. On this occasion, good luck to all the officers along with wife Mrs. Kanchan Ponnanna, 03/10/2025

ಬೆಂಗಳೂರು ಕೊಡವ ಸಮಾಜದ ಆಡಳಿತ ಮಂಡಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ಚಿರಿಯಪಂಡ ಸುರೇಶ್ ನಂಜಪ್ಪ ರವರು ಹಾಗೂ ಪದಾಧಿಕಾರಿಗಳು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರ ಜೊತೆ ಎಲ್ಲ ಪದಾಧಿಕಾರಿಗಳಿಗೆ ಶುಭ ಕೋರಲಾಯಿತು.