On the occasion of Puttari, the auspicious festival of the people of Kodagu, prayed that the Lord Sri Padi Igguthappa will bless all the people of the state who offered special pooja at Sri Padi Igguthappa temple, 04/12/2025
ಕೊಡಗಿನ ಜನತೆಯ ಪವಿತ್ರ ಹಬ್ಬವಾದ ಪುತ್ತರಿ ಪ್ರಯುಕ್ತ, ಶ್ರೀ ಪಾಡಿ ಇಗ್ಗುತಪ್ಪ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಾಡಿನ ಸಮಸ್ತ ಜನತೆಗೆ ಶ್ರೀ ಪಾಡಿ ಇಗ್ಗುತಪ್ಪ ದೇವರು ಸುಖ-ಶಾಂತಿ ಹಾಗೂ ಸುಭಿಕ್ಷೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.

State government distributed kits to registered workers by building and other labor board. On this occasion, a new traffic health unit formed with the health of the workers was inaugurated, 04/12/2025
ರಾಜ್ಯ ಸರ್ಕಾರದ ನೋಂದಾಯಿತ ಕಾರ್ಮಿಕರಿಗೆ ಕಟ್ಟಡ ಮತ್ತು ಇತರೆ ಕಾರ್ಮಿಕ ಮಂಡಳಿಯಿಂದ ನೀಡಲಾಗುವ ಕಿಟ್ ಗಳನ್ನು ವಿತರಿಸಿದೆ. ಇದೇ ಸಂದರ್ಭದಲ್ಲಿ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ರೂಪಿಸಿರುವ ನೂತನ ಸಂಚಾರಿ ಆರೋಗ್ಯ ಘಟಕವನ್ನು ಉದ್ಘಾಟನೆ ಮಾಡಲಾಯಿತು.

Inauguration of new concrete road of Gandhi nagar and Keerthi layout in Virajpet taluk municipality area of Virajpet assembly constituency, 04/12/2025
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕಿನ ಪುರಸಭೆ ವ್ಯಾಪ್ತಿಯ ಗಾಂಧಿ ನಗರ ಹಾಗೂ ಕೀರ್ತಿ ಬಡಾವಣೆಯ ನೂತನ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ನೆರವೇರಿಸಲಾಯಿತು.

Road development work is going to start in Virajpet Municipality area and roads inspected in the city with party leaders, 04/12/2025
ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದ್ದು ಇಂದು ಪಕ್ಷದ ಮುಖಂಡರೊಡನೆ ನಗರದಲ್ಲಿ ರಸ್ತೆಗಳ ವೀಕ್ಷಣೆ ಮಾಡಲಾಯಿತು.

Happy Huttari to all the people of the state., 04/12/2025
ನಾಡ್'ರ ಮಹಾಜನತೆಕ್ ಪುತ್ತರಿ ನಮ್ಮೆರ ನಲ್ಲಾಮೆ.
ನಾಡಿನ ಸಮಸ್ತ ಜನತೆಗೆ ಹುತ್ತರಿ ಹಬ್ಬದ ಶುಭಾಶಯಗಳು.
