While watching the place related to Shri Kaveramma Welfare Charitable Trust in Bhagamandala with officers, 04/11/2025
ಅಧಿಕಾರಿಗಳೊಂದಿಗೆ ಭಾಗಮಂಡಲದಲ್ಲಿರುವ ಶ್ರೀ ಕಾವೇರಮ್ಮ ಹಿತರಕ್ಷಣ ಚಾರಿಟೇಬಲ್ ಟ್ರಸ್ಟ್ ಕೊಡವಗೆ ಸಂಬಂಧಿಸಿದ ಜಾಗವನ್ನು ವೀಕ್ಷಿಸಿದ ಸಂದರ್ಭ.

The Honorable Chief Minister was presented with a caste certificate by the President and office bearers of the Kembatti community, recognizing them under the Adi Karnataka category. A formal request was submitted to include Kembatti as a sub-caste in the, 03/11/2025
ಮಾನ್ಯ ಮುಖ್ಯಮಂತ್ರಿಯವರಿಗೆ ಕೆಂಬಟ್ಟಿ ಸಮುದಾಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನಿಯೋಗದೊಂದಿಗೆ ಭೇಟಿ ಮಾಡಿ ಕೆಂಬಟ್ಟಿ ಜನಾಂಗವು ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಉಪಜಾತಿಯ ಪಟ್ಟಿಯಲ್ಲಿ ಕೆಂಬಟ್ಟಿ ಜಾತಿಯೆಂದು ನಮೂದಿಸಲು ಮನವಿ ಸಲ್ಲಿಸಲಾಯಿತು.

Heartfelt congratulations to the Indian women’s team for their remarkable World Cup victory through an outstanding and unmatched performance. This extraordinary achievement has made the entire nation proud. Best wishes to all the players who have created, 03/11/2025
ಅದ್ಭುತ ಪ್ರದರ್ಶನ ಹಾಗೂ ಹೊಂದಾಣಿಕೆಯ ಆಟವಾಡಿ ವಿಶ್ವಕಪ್ ಕ್ರಿಕೆಟ್ ಜಯಿಸಿದ ಭಾರತೀಯ ಮಹಿಳಾ ಆಟಗಾರ್ತಿಯರಿಗೆ ಹೃದಯಸ್ಪರ್ಶಿ ಅಭಿನಂದನೆಗಳು.
ನಿಮ್ಮೆಲ್ಲರ ಈ ಅದ್ಭುತ ಸಾಧನೆ ದೇಶಕ್ಕೆ ಹೆಮ್ಮೆ ತರುವಂತದ್ದು. ಇತಿಹಾಸ ಸೃಷ್ಟಿಸಿದ ನಿಮಗೆ ಶುಭಾಶಯಗಳು.

Honorable Chief Minister Sri Siddaramaiah graciously accepted the request to inaugurate the launch of the Kodagu Kodava Takk Federation and approved the allocation of 8 acres of land for the initiative. Kodagu District In-charge Minister Shri Bhosaraju, , 03/11/2025
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು ಕೊಡಗು ಕೊಡವ ತಕ್ಕ್ ಒಕ್ಕೂಟದ ಲಾಂಛನ ಬಿಡುಗಡೆ ಮಾಡಿ 8 ಎಕರೆ ಜಾಗ ಮಂಜೂರು ಮಾಡುವ ಕುರಿತು ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಭೋಸರಾಜು , ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್ ಮತ್ತು ಹಿಂದುಳಿದ ವರ್ಗ ಸಚಿವರಾದ ಶ್ರೀ ಶಿವರಾಜ್ ತಂಗಡಗಿ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Honorable Chief Minister Shri Siddaramaiah released the tournament launch by putting Chenanda at Home Office Krishna. One crore rupees for this tournament to be held in May 2026 The Chief Minister has promised to provide grants and come to watch the tourn, 02/11/2025
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಗೃಹಕಚೇರಿ ಕೃಷ್ಣದಲ್ಲಿ ಚೇನಂಡ ಹಾಕಿ ಪಂದ್ಯಾವಳಿಯ ಲಾಂಛನ ಬಿಡುಗಡೆ ಮಾಡಿದರು. 2026ರ ಮೇ ತಿಂಗಳಲ್ಲಿ ನಡೆಯುವ ಈ ಪಂದ್ಯಾವಳಿಗೆ ಒಂದು ಕೋಟಿ ರೂ. ಅನುದಾನ ಒದಗಿಸುವುದಾಗಿ ಹಾಗೂ ಪಂದ್ಯಾವಳಿ ನೋಡಲು ಬರುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಭೋಸರಾಜು , ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರತಿ ಸುರೇಶ್ ಮತ್ತು ಹಿಂದುಳಿದ ವರ್ಗ ಸಚಿವರಾದ ಶ್ರೀ ಶಿವರಾಜ್ ತಂಗಡಗಿ, ಚೇನಂಡ ಕುಟುಂಬಸ್ಥರು ಹಾಗೂ ಕೊಡವ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
