While participating in the progress review meeting of Virajpet and Ponnampet Taluk-level officers held at Ambedkar Bhavan, Virajpet, discussions were conducted on the implementation of ongoing development projects, review of departmental progress, and mea, 05/11/2025

ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.


A request for a grant of ₹50 lakhs was submitted to Hon’ble Minister Shri Ramalinga Reddy for the restoration of the Mahishasura Mardini Temple located at Bhagamandala Tavur in Kodagu district. The Minister assured that the grant would be released to supp, 05/11/2025

ಕೊಡಗು ಜಿಲ್ಲೆಯ ಭಾಗಮಂಡಲ ತಾವೂರಿನಲ್ಲಿರುವ ಮಹಿಷಾಸುರ ಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 50 ಲಕ್ಷ ರೂ. ಅನುದಾನಕ್ಕಾಗಿ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಚಿವರು ಅನುದಾನ ಬಿಡುಗಡೆಯ ಭರವಸೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


District In-charge Minister Shri N.S. Bhosaraju and Madikeri Constituency MLA Dr. Manthar Gowda met with District Guarantee Implementation Committee President Shri Dharmaja Uttappa and Revenue Minister Shri Krishna Byre Gowda to discuss the ongoing farmer, 05/11/2025

ಸಿ ಅಂಡ್ ಡಿ ಜಾಗದ ಸಮಸ್ಯೆ ಬಗ್ಗೆ ರೈತರು ನಡೆಸುತ್ತಿರುವ ಹೋರಾಟದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್.ಭೋಸರಾಜು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾ ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರ ಜೊತೆ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಜಿಲ್ಲೆಯ ರೈತರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಯಿತು .ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ಅವರು ಈ ಬಗ್ಗೆ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಸಮಿತಿಯನ್ನು ರಚಿಸಲಾಗುವುದೆಂದು ಭರವಸೆ ನೀಡಿದರು.


Hon’ble Forest Minister Shri Eshwar Khandre visited the protest site of the Karnataka Forest Students and Graduates Association at Ponnampet and Sirsi. During the visit, he interacted with the members, assured them that their requests would be considered,, 05/11/2025

ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ರವರ ಜೊತೆ ಪೊನ್ನಂಪೇಟೆ ಮತ್ತು ಶಿರಸಿಯ ಕರ್ನಾಟಕ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳ ಮತ್ತು ಪದವೀಧರರ ಸಂಘದ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಲಾಯಿತು.


During the event, best wishes were extended for the Late A.K. Subbaiah Memorial Cup Football Tournament, organized by the Kalluboys team. The logo of the tournament was also unveiled on this occasion., 05/11/2025

ಕಲ್ಲುಬಾಯ್ಸ್ ವತಿಯಿಂದ ಆಯೋಜನೆಗೊಂಡಿರುವ, ದಿವಂಗತ ಎ.ಕೆ ಸುಬ್ಬಯ್ಯ ಮೆಮೋರಿಯಲ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಲೋಗೋ ಬಿಡುಗಡೆಗೊಳಿಸಿ ಶುಭ ಕೋರಿದ ಸಂದರ್ಭ.