Karaumbiah Academy for Learning and Sports Graduation Day program, 18/02/2022

ಗೋಣಿಕೊಪ್ಪಲಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ, ಕರುಂಬಯ್ಯ ಅಕಾಡೆಮಿ ಫಾರ್ ಲರ್ನಿಂಗ್ ಅಂಡ್ ಸ್ಪೋರ್ಟ್ಸ್'ನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಗ್ರ್ಯಾಜುಯೇಷನ್ ಡೇ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ನನ್ನ ಜೊತೆ ನನ್ನ ಧರ್ಮಪತ್ನಿ ಹಾಗೂ ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಕಂಚನ್ ಪೊನ್ನಣ್ಣ ಅವರೂ ಕೂಡ ಭಾಗವಹಿಸಿದ್ದರು. ದತ್ತ ಕರುಂಬಯ್ಯ ಮತ್ತು ಅಶ್ವಿನಿ ನಾಚಪ್ಪ ದಂಪತಿಗಳು ಕೊಡಗಿನಲ್ಲಿ ಸ್ಥಾಪಿಸಿರುವ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ವ್ಯವಸ್ಥೆಯೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಹಾಗೂ ಕ್ರೀಡಾ ತರಬೇತಿ ಒದಗಿಸುತ್ತಿದೆ. ಅವರಿಗೆ ಈ ಉನ್ನತ ಮಟ್ಟದ ಸಂಸ್ಥೆ ಸ್ಥಾಪಿಸಿ ಯಶಸ್ವಿಯಾಗಿ ನಡೆಸುತ್ತಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸಿದೆ. ಅತ್ಯಂತ ಶಿಸ್ತಿನಿಂದ ಸಮಾರಂಭದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೂ, ಸಂಸ್ಥೆಯ ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ ಅವರಿಗು, ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರಿಗೂ ನನ್ನ ಅಭಿನಂದನೆಗಳು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಕೂಡ ಹಾರೈಸುತ್ತೇನೆ.
 
 
img
img
img
img
img
img
 

Protest against the assault on ex-Zilla Panchayat member, 17/02/2022

ಚೆಟ್ಟಳ್ಳಿ ಗ್ರಾಮದಲ್ಲಿ ಪಕ್ಷದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ, ಒಬ್ಬ ಮಹಿಳಾ ಮುಖಂಡರ ಮೇಲೆ ನಡೆದಂತ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸರು ತೋರಿಸುತ್ತಿರುವ ನಿರ್ಲಕ್ಷ್ಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂದರ್ಭ. ಈ ರೀತಿಯ ಹಲ್ಲೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡುವ ಪೆಟ್ಟುಗಳು. ಪಕ್ಷ ತನ್ನ ಕಾರ್ಯಕರ್ತರ, ಬೆಂಬಲಿಗರ ಹಾಗೂ ಮುಖಂಡರ ಪರವಾಗಿ ಸದಾ ನಿಲ್ಲುತ್ತದೆ.

 
 

Cricket tournament in Ponnampet, 17/02/2022

ಪೊನ್ನಂಪೇಟೆಯಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯವನ್ನು ಉದ್ಘಾಟಿಸಿ, ಕ್ರೀಡಾಪಟುಗಳನ್ನು ಮತ್ತು ಅಲ್ಲಿ ಸೇರಿದ್ದ ಎಲ್ಲಾ ವೀಕ್ಷಕರನ್ನು ಭೇಟಿಮಾಡಿ ನನ್ನ ಕೆಲವು ಅನಿಸಿಕೆಗಳನ್ನು ಅವರ ಜೊತೆ ಹಂಚಿಕೊಂಡ ಸಂದರ್ಭ.
 
 
img
img
img
 

Visit to Sri Durga Bhagavati Temple in Madikeri , 13/02/2022

ಮಡಿಕೇರಿಯ ಕಾಟಗೇರಿಯಲ್ಲಿರುವ ಶ್ರೀ ದುರ್ಗಾಭಗವತಿ ದೇವಸ್ಥಾನಕ್ಕೆ ನನ್ನ ಧರ್ಮಪತ್ನಿ ಜೊತೆ ಶನಿವಾರ ಭೇಟಿ ನೀಡಿ ಪೂಜೆ ಸಲ್ಲಿಸಿದೆವು.
ದೇವಸ್ಥಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಮ್ಮನ್ನು ಬರಮಾಡಿಕೊಂಡು ನಮಗೆ ಶ್ರೀಕ್ಷೇತ್ರದ ಮಹತ್ವದ ಬಗ್ಗೆ ವಿವರಿಸಿದರು.
 
 
 

Honoured by Kodava Samaja Bengaluru, 12/02/2022

ಬಂದೂಕು ಪರವಾನಗಿ ವಿನಾಯಿತಿ ಪ್ರಕರಣದಲ್ಲಿ, ಉಚ್ಚ ನ್ಯಾಯಾಲಯದ ಮುಂದೆ ನಾನು ಮಂಡಿಸಿದ ವಾದ ಹಾಗೂ ಪ್ರಕರಣದಲ್ಲಿ ನಾನು ವಹಿಸಿದ ಪಾತ್ರವನ್ನು ಗುರುತಿಸಿ, ಕೊಡವ ಸಮಾಜ ಬೆಂಗಳೂರು ಅವರು, ಕೊಡವರ ಹೆಮ್ಮೆಯ ಪ್ರತೀಕವಾದ ಒಡಿ ಕತ್ತಿಯನ್ನು ನನಗೆ ಕಾಣಿಕೆಯ ರೂಪದಲ್ಲಿ ನೀಡಿ ಸನ್ಮಾನಿಸಿದ್ದಾರೆ. ನನ್ನ ಎಲ್ಲಾ ಪೂರ್ವಜರಿಗೆ, ಹಿರಿಯರಿಗೆ, ಕೊಡವ ಸಮಾಜ ಬೆಂಗಳೂರಿನ ಅಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ, ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಮತ್ತು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಇದೇ ಸಂದರ್ಭದಲ್ಲಿ, ಈ ಪ್ರಕರಣದಲ್ಲಿ ವಕಾಲತ್ತು ನಡೆಸಿದ ಎಲ್ಲಾ ವಕೀಲರನ್ನು ಸಮಾಜ ಗೌರವಿಸಿದೆ. ಅವರೆಲ್ಲರಿಗೂ ನನ್ನ ಅಭಿನಂದನೆಗಳು. ತಾಯಿ ಕಾವೇರಿಯ ಆಶೀರ್ವಾದ ಮತ್ತು ರಕ್ಷಣೆ ಎಲ್ಲರ ಮೇಲಿರಲಿ ಎಂದು ಬೇಡಿಕೊಳ್ಳುತ್ತೇನೆ.
 
 
img