Ganesha Chaturti wishes to everyone, 01/09/2022

ಗೌರಿ-ಗಣೇಶ ಹಬ್ಬವನ್ನು ಆಚರಿಸುತ್ತಿರುವ ನಾಡಿನ ಸಮಸ್ತ ಜನತೆಗೆ ನಲ್ಮೆಯ ಶುಭ ಹಾರೈಕೆಗಳು. ದೇವರು ಎಲ್ಲರ ಬಾಳಲ್ಲಿ ಸಂತೋಷ-ಸಮೃದ್ಧಿಯನ್ನು ತುಂಬಲಿ ಎಂದು ಪ್ರಾರ್ಥಿಸುತ್ತೇನೆ. ಎಂದಿನಂತೆ ನಮ್ಮ ಮನೆಯಲ್ಲೂ ಗಣೇಶನ ಪೂಜೆಯನ್ನು ಮನೆಯವರರೆಲ್ಲ ನೆರವೇರಿಸಿದೆವು.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Hudikeri #GowriGanesha #GaneshaChaturti
 
 
img
 

Visit to memorial for soldiers who sacrificed their lives for the country, 30/08/2022

ಚೆಟ್ಟಿಮಾನಿ ಬಳಿ ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕಕ್ಕೆ ಭೇಟಿ ನೀಡಿದ ಸಂದರ್ಭ. ವೀರ ಯೋಧರಿಗೆ ಕೊಡಗು ಪ್ರಸಿದ್ಧ. ದೇಶ ಸೇವೆಯಲ್ಲಿ ಸದಾ ಮುಂದಿರುವ ಕೊಡಗಿನ ಯೋಧರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸಿದೆ.
 
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ, ಜನರಲ್ ಕೆ.ಎಸ್.ತಿಮ್ಮಯ್ಯ ಅವರಿಂದ ಮೊದಲುಗೊಂಡು ಸಾವಿರಾರು ವೀರ ಯೋಧರು ಭಾರತಕ್ಕೆ ಸೇವೆ ಸಲ್ಲಿಸಿದ್ದಾರೆ. ತನ್ನದೇ ಭವ್ಯವಾದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಚೆಟ್ಟಿಮಾನಿಯಲ್ಲಿ ಯೋಧರ ಸ್ಮಾರಕ ಇರುವುದು ಹೆಮ್ಮೆಯ ವಿಷಯ.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Temple #Cherambane #Soldiers #IndianArmy #Memorial
 
 
img
 

We hold the key to shaping our lives and building our future, 29/08/2022

ನಮ್ಮ ಜೀವನವನ್ನು ರೂಪಿಸುವ ಶಕ್ತಿ ಇರುವುದು ಬೇರೆಯವರ ಕೈಯಲಲ್ಲ. ನಮ್ಮ ಭವಿಷ್ಯ ರೂಪಿಸುವ ಶಕ್ತಿ ಇರುವುದು ನಮಗೆ ಮಾತ್ರ. ಅದಕ್ಕೆ ನಾವು ವ್ಯಯಿಸಬೇಕಿರುವುದು ನಮ್ಮ ಶ್ರಮ.
 
ನಮ್ಮ ತಂದೆ-ತಾಯಿ ಹೆಸರಿನಲ್ಲಿ ಶ್ರೀ ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ಸ್ಥಾಪಿಸಿ, ಎರಡನೇ ವರ್ಷ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮದಲ್ಲಿ ಅವರನ್ನು ಉದ್ದೇಶಿಸಿ ಈ ಮೇಲಿನ ಮಾತುಗಳನ್ನು ಹೇಳಿದೆ. ಈ ವರ್ಷ ಟ್ರಸ್ಟ್ ನ ವತಿಯಿಂದ ಮತ್ತು ಪ್ರಯೋಜಕರ ಸಹಭಾಗಿತ್ವದಲ್ಲಿ 67 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
 
ಕಾಲೇಜಿಗೆ ಹೋಗಿ ಉತ್ತಮ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ, ಸಮಾಜದ ಆಗುಹೋಗುಗಳನ್ನು ಅರಿತು, ರಾಜಕೀಯ, ಸಾಮಾಜಿಕ ವಿಷಯಗಳನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ. ಮಹಾತ್ಮ ಗಾಂಧಿ, ಅಂಬೇಡ್ಕರ್ ಮುಂತಾದ ಮಹನೀಯರ ಜೀವನದ ಬಗ್ಗೆ ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಆದರ್ಶಗಳನ್ನು ತಿಳಿಯಬೇಕು, ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ತಿಳಿಹೇಳಿದೆ.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Students #Scholarship
 
 
img
 
 
 

Scholarships distributed to 67 girl students in Kodagu, 28/08/2022

ಶ್ರೀ ಎ. ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ವತಿಯಿಂದ ಕೊಡಗಿನ 67 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮದ ವಿವರಗಳು ಪತ್ರಿಕೆಗಳಲ್ಲಿ ವರದಿಯಾಗಿದೆ.
 
ಕಳೆದ ವರ್ಷದಂತೆ ಈ ವರ್ಷವೂ ಈ ಕಾರ್ಯಕ್ರಮಕ್ಕೆ ನಮ್ಮ ಟ್ರಸ್ಟ್ ಜೊತೆ ಕೈಜೋಡಿಸಿದ ಕೊಡಗಿನ ಮುಖ್ಯ ದಿನಪತ್ರಿಕೆಯಾದ ಶಕ್ತಿ ದಿನಪತ್ರಿಕೆಗೆ ನನ್ನ ಧನ್ಯವಾದಗಳು. ಇ-ವಿಧ್ಯಾ ಮತ್ತು ದಿ ಭಟ್ಸ್ ಡೆಂಟಲ್ ಪ್ರಾಕ್ಟೀಸ್ ಸಂಸ್ಥೆಗಳು ಕೂಡ ನಮ್ಮ ಜೊತೆ ಭಾಗಿಯಾಗಿದ್ದರು. ಅವರುಗಳಿಗೂ ಧನ್ಯವಾದಗಳು.
 
ಈಗಾಗಲೇ ಪಿಯುಸಿ ಮುಗಿಸಿ ಡಿಗ್ರಿ ಸೇರಿರುವ, ಶಿಕ್ಷಣ ಪಡೆಯಲು ಆರ್ಥಿಕ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಮೂರು ವರ್ಷಗಳ ಕಾಲ ವರ್ಷಕ್ಕೆ ತಲಾ ರೂ.10,000 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ನಮ್ಮ ಟ್ರಸ್ಟ್ ನ ಈ ಕೆಲಸದಲ್ಲಿ ನೇರವಾಗಿ, ಪರೋಕ್ಷವಾಗಿ ಸಹಕರಿಸಿದ ಮತ್ತು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Students #Scholarship
 
img
 

AS Ponnanna to distribute scholarship through AK Subbaiah - Ponnamma Trust today, 27/08/2022

ಇಂದು, ಶ್ರೀ ಎ. ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ವತಿಯಿಂದ ಕೊಡಗಿನ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ನಮ್ಮ ತಂದೆ ಎ.ಕೆ.ಸುಬ್ಬಯ್ಯ ಅವರ ಪುಣ್ಯ ಸ್ಮರಣೆಯ ದಿನ ಈ ಕಾರ್ಯಕ್ರಮ ಜರಗುತ್ತಿದೆ.
 
ಈ ಸದುದ್ದೇಶದ ಕಾರ್ಯಕ್ಕೆ ನಮ್ಮ ಜೊತೆ ಕೈಜೋಡಿಸಿದ ಶಕ್ತಿ ದಿನಪತ್ರಿಕೆ, ಇ-ವಿಧ್ಯಾ ಮತ್ತು ದಿ ಭಟ್ಸ್ ಡೆಂಟಲ್ ಪ್ರಾಕ್ಟೀಸ್ ಅವರುಗಳಿಗೆ ಧನ್ಯವಾದಗಳು. ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಶ್ರಮ ವಹಿಸಿದ ಶಕ್ತಿ ದಿನಪತ್ರಿಕೆ ಬಳಗಕ್ಕೆ ವಿಶೇಷ ಧನ್ಯವಾದಗಳು.
 
ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Students #Scholarship
 
 
img