Pledge to donate eyes and organs, 31/10/2022
Pledge to donate eyes and organs. ದಾನ ಮಾಡುವುದೇ ಮನುಷ್ಯತ್ವ
ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಮತ್ತು ಮಡಿಕೇರಿಯ ದಿ. ಪಂದ್ಯಂಡ ಆಶಾ ಗಣಪತಿ ಅವರುಗಳ ಸ್ಮರಣಾರ್ಥ ಅಂಗಾಂಗಗಳ ದಾನಮಾಡುವ ಪ್ರೇರೇಪಣಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭ.
ಈ ಕಾರ್ಯಕ್ರಮದಲ್ಲಿ 25 ಜನ ನೇತ್ರದಾನ ಮಾಡಲು ಮತ್ತು ಎಂಟು ಮಂದಿ ದೇಹದಾನ ಮಾಡಲು ನೋಂದಾಯಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಸ್ಥಳದಲ್ಲೇ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 14 ಜನ ರಕ್ತದಾನ ಕೂಡ ಮಾಡಿದ್ದಾರೆ.
ದಾನ ಮಾಡುವುದು ಮನುಷ್ಯನ ಸಹಜ ಗುಣ. ಬದುಕಿದ್ದಾಗ ಹಣವಾಗಲಿ, ಸತ್ತ ನಂತರ ನಮ್ಮ ದೇಹದ ಅಂಗಾಂಗಗಳನ್ನಾಗಲಿ ದಾನ ಮಾಡುವುದು ಶ್ರೇಷ್ಠ ಗುಣ. ಇದೊಂದು ಪುಣ್ಯದ ಕೆಲಸವೆಂದೇ ನನ್ನ ಭಾವನೆ.
ಲಯನ್ಸ್ ಸಂಸ್ಥೆ ಸತತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯವರು ಇವರ ಜೊತೆಗೂಡಿ ಮಡಿಕೇರಿಯಲ್ಲಿ ಆಯೋಜಿಸಿದ್ದ ಈ ಯಶಸ್ವಿ ಕಾರ್ಯಕ್ರಮಕ್ಕೆ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Chennayyanakote #EyeDonation #BloodDonation #DSS #LionsClub #PuneethRajkumar

Visit to Chennayanakote Panchayat, 28/10/2022
Visit to Chennayanakote Panchayat. ಚೆನ್ನಯ್ಯನಕೋಟೆ ಪಂಚಾಯತಿಗೆ ಭೇಟಿ
ಚೆನ್ನಯ್ಯನಕೋಟೆ ಪಂಚಾಯತಿಯ ಪ್ರದೇಶಕ್ಕೆ ಭೇಟಿಕೊಟ್ಟು ಸ್ಥಳೀಯ ಗ್ರಾಮಸ್ಥರ ಹಲವಾರು ಸಮಸ್ಯೆಗಳ ಬಗ್ಗೆ ಅವರ ಜೊತೆ ಚರ್ಚೆ ನಡೆಸಿದೆ. ಈ ಭೇಟಿಯವೇಳೆ ಸ್ಥಳದಲ್ಲೇ ಒಂದೆರಡು ಸಣ್ಣ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ ಸಂತಸ ಇದೆ.
ಜನರ ದಿನನಿತ್ಯದ ಸಮಸ್ಯೆಗಳನ್ನು ಬಗೆಹರಿಸಲು ಇಚ್ಚಶಕ್ತಿ ಬೇಕು. ಸ್ಥಳೀಯ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಜನರ ನಡುವೆ ಇದ್ದಾಗಲೇ, ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Chennayyanakote

State-level shooting competition, 26/10/2022
State-level shooting competition. ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆ
ನಾಲ್ನಾಡ್ ಪ್ಲಾಂಟರ್ಸ್ ರೇಕ್ರಿಯೇಷನ್ ಅಸ್ಸೊಸಿಯೇಶನ್ ಅವರು ಆಯೋಜಿಸಿದ್ದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಗಳ ಸಮಾರಂಭದಲ್ಲಿ ಪಾಲ್ಗೊಂಡು ಸ್ಪರ್ದಿಗಳನ್ನು ಉದ್ದೇಶಿಸಿ ಮಾತನಾಡಿದೆ.
ಈ ಸ್ಪರ್ಧೆಯಲ್ಲಿ ಸಾಕಷ್ಟು ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ. ಕೊಡಗು ಸಾಂಪ್ರದಾಯಿಕ ಕ್ರೀಡೆಗಳಿಗೆ ಮತ್ತು ಆಚರಣೆಗಳಿಗೆ ಹೆಸರುವಾಸಿ. ಈ ರೀತಿಯ ಸ್ಪರ್ಧೆಗಳನ್ನು ಆಯೋಜನೆ ಮಾಡುವುದರಿಂದ ಈ ಪರಂಪರೆಯನ್ನು ನಾವು ಮುಂದುವರೆಸಲು ಸಹಾಯವಾಗುತ್ತದೆ. ಸ್ಪರ್ಧೆಯನ್ನು ಆಯೋಜಿಸಿದ್ದ ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಕ್ರೀಡಾಪಟುಗಳಿಗೂ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Nalnad #Shooting

Sri Narayana Guru Jayanti and Onam celebrations, 25/10/2022
ಶ್ರೀ ನಾರಾಯಣ ಧರ್ಮ ಪರಿಪಾಲನ ಸಂಸ್ಥೆ, ಪೊನ್ನಂಪೇಟೆ, ವತಿಯಿಂದ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ ಆಯೋಜಿಸಲಾಗಿದ್ದ 169ನೇ ಶ್ರೀ ನಾರಾಯಣ ಗುರು ಜಯಂತಿ ಮತ್ತು ಓಣಂ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭ.
ಶ್ರೀ ನಾರಾಯಣ ಗುರುಗಳು ಸರ್ವಕಾಲಕ್ಕೂ, ಸರ್ವಜನರಿಗೂ ಸಲ್ಲುವ ಒಂದೇ ದೇವರು, ಒಂದೇ ಧರ್ಮ, ಒಂದೇ ಮನುಜ ಮತದ ಮಂತ್ರ ಹೇಳಿಕೊಟ್ಟವರು. ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿದ ಆಯೋಜಕರಿಗೆ, ಬಹಳ ಸುಂದರವಾಗಿ ಅದನ್ನು ನಡೆಸಿಕೊಟ್ಟ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದಗಳು ಮತ್ತು ಶುಭ ಹಾರೈಕೆಗಳು.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #NarayanaGuru #Onam

It is a joy to serve people, 20/10/2022
It is a joy to serve people. ಜನರ ಸೇವೆಯಲ್ಲೆ ಖುಷಿ ದೊರೆಯುತ್ತದೆ
ಅನ್ನದಾನಗಳಿಂದ |ಮುನ್ನ ದಾನಗಳಿಲ್ಲ | ಅರ್ಥದಲ್ಲಿ ಮಿಗಿಲು ಇನ್ನಿಲ್ಲ, ಜಗದೊಳಗೆ ಅನ್ನವೇ ಪ್ರಾಣ ಸರ್ವಜ್ಞ ||
ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ, ಆಕ್ಟೊಬರ್ 17 ರಿಂದ ನವೆಂಬರ್ 17 ರ ವರೆಗೂ, ಭಕ್ತಾದಿಗಳಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯುತ್ತಿದ್ದು ಅದರಲ್ಲಿ ನಾನು ಭಾಗಿಯಾದ ಸಂಧರ್ಬ.
ಅನ್ನ ಸಂತರ್ಪಣಾ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿರುವ ಆಯೋಜಕರಿಗೆ ನನ್ನ ಅಭಿನಂದನೆಗಳು. ಈ ಪುಣ್ಯ ಕಾರ್ಯಕ್ಕೆ ಕೈಜೋಡಿಸಿರುವ ಎಲ್ಲರಿಗೂ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri #Talakaveri #ASPonnanna #Ponnanna #Sankramana #Teerthodbhava
