Members of the Chenanda and Ponnanda families performed a local road pooja ceremony in Kokeri, located near the Napoklu block of Madikeri taluk. Following this, they visited the Ainmane (ancestral house) of the Kummanda family, where they assured the comm, 05/11/2025

ಮಡಿಕೇರಿ ತಾಲೂಕು ನಾಪೋಕ್ಲು ಬ್ಲಾಕ್ ಗೆ ಒಳಪಟ್ಟ ಕೊಕೇರಿಯಲ್ಲಿ ಚೇನಂಡ ಹಾಗೂ ಪೊನ್ನಂಡ ಕುಟುಂಬಸ್ಥರ ಹಾಗೂ ಸ್ಥಳೀಯ ರಸ್ತೆಗಳ ಗುದ್ದಲಿ ಪೂಜೆ ಮಾಡಿ ಬಳಿಕ ಅದೇ‌ ಭಾಗದಲ್ಲಿ ಕುಮ್ಮಂಡ ಕುಟುಂಬಸ್ಥರ ಐನ್ ಮನೆಗೆ ಭೇಟಿ ನೀಡಿ ಅಲ್ಲಿಗೆ ತೆರಳುವ ರಸ್ತೆಯ ‌ಅಭಿವೃದ್ದಿಯ‌ ಭರವಸೆ ನೀಡಲಾಯಿತು.


The Chenanda family organized a unique initiative titled Plantation Drive and launched a special program to plant a tree for every goal scored in the upcoming Chenanda Cup Hockey Tournament., 04/11/2025

ಚೇನಂಡ ಕುಟುಂಬದವರು ಪ್ಲಾಂಟೇಶನ್ ಡ್ರೈವ್ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮುಂಬರುವ ಚೇನಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಪ್ರತಿಯೊಂದು ಗೋಲಿಗೂ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


Participated in the inaugural event of the Kodagu District Kulala (Kumbara) Champions Trophy – 2025 Season 1 tournament organized at Sri Bachattira Lalu Muddhiah Stadium, Murnadu, 04/11/2025

ಮೂರ್ನಾಡಿನ ಶ್ರೀ ಬಾಚಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜನೆಗೊಂಡ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಚಾಂಪಿಯನ್ಸ್ ಟ್ರೋಫಿ-2025 ಸೀಸನ್ 1 ಪಂದ್ಯಾಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.


Participated in the inauguration of the 4th Annual Sharada Pooja and Short Sports Meet organized at Poovvalamani in the Chettimani area of Madikeri Taluk, 04/11/2025

ಮಡಿಕೇರಿ ತಾಲೂಕು ಚೆಟ್ಟಿಮಾನಿ ಭಾಗದಲ್ಲಿ ಪೂವ್ವಲಮಾನಿಯಲ್ಲಿ ಆಯೋಜಿಸಿದ್ದ 4ನೇ ವರ್ಷದ ಶಾರದಾ ಪೂಜಾ ಹಾಗೂ ಕಿರು ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.


Deeply saddened to hear about the passing of senior Congress leader and former minister Shri H. Y. Meti due to illness. His demise is an irreparable loss to the party. May his soul rest in peace, and may the bereaved family find strength and comfort durin, 04/11/2025

ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ಹೆಚ್.ವೈ ಮೇಟಿ ಅವರು ಅನಾರೋಗ್ಯದಿಂದಾಗಿ ಇಂದು ನಿಧನರಾದ ವಿಷಯ ತಿಳಿದು ಮನಸ್ಸಿಗೆ ನೋವಾಗಿದೆ. ಅವರ ಅಗಲಿಕೆಯಿಂದ ಪಕ್ಷಕ್ಕೆ ಭರಿಸಲಾಗದ ನಷ್ಟವಾಗಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬ ಸದಸ್ಯರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.